ನಮ್ಮ ಸಂಘದ ಕುರಿತು

ಕರ್ನಾಟಕ ರಾಜ್ಯ ವೀರಶೈವ ಲಿಂಗಯಾತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ದಿ ಸಂಘವು ೦೭.೧೧.೨೦೧೧ ರಂದು ನೋಂದಣೆಯಾಯಿತು. ನೋಂದಣೆ ಸಂಖ್ಯೆ SOR/BLU/DRCZ/10/2011-12 ಇದ್ದು ೨೧ ಸದಸ್ಯರ ಸಮಿತಿಯೊಂದಿಗೆ ಶ್ರೀ ಸೋಮನಗೌಡ ಪಾಟೀಲ್ ರವರ ಮತ್ತು ಶ್ರೀ ಶರಣಬಸವ ಹತ್ತಿಯವರ ಕನಸಿನ ಕೂಸಾಗಿ ಸ್ಥಾಪಿತವಾದ ಸಂಘವು ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಲು ಕೈಜೋಡಿಸುವ ಉದ್ದೇಶವನ್ನು ಹೊಂದಿ ತನ್ನದೇ ಆದ ಬೈಲಾವನ್ನು ಮತ್ತು ಗುರಿ ಉದ್ದೇಶಗಳನ್ನು ಅಳವಡಿಸಿಕೊಂಡು ರಾಜ್ಯದ ಜಿಲ್ಲೆಗಳನ್ನು ವ್ಯಾಪ್ತಿ ಮಾಡಿಕೊಂಡು ಜಿಲ್ಲಾವಾರು ಸಭೆಗಳನ್ನು ಮಾಡುತ್ತಾ ಪ್ರತಿವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಾ ಸಮಾಜದ ಏರುಪೇರುಗಳಿಗೆ ಸ್ಪಂದಿಸುತ್ತಾ ಹಳ್ಳಿ ಹಳ್ಳಿಗಳಲ್ಲಿ ನೌಕರರನ್ನು ಗುರುತಿಸಿ ಸದಸ್ಯರನ್ನು ನೋಂದಣೆ ಮಾಡುತ್ತಾ ಬಂದಿದೆ ಮತ್ತು ಆರ್ಥಿಕ ಭದ್ರತೆ ಇದ್ದರೆ ಇತರೆ ಎಲ್ಲಾ ರಂಗಗಳಲ್ಲಿ ಪ್ರಗತಿ ಸಾಧಿಸಲು ಸಾದ್ಯ ಎಂಬುದನ್ನು ಅರಿತು ಹರಿಹರ ನಗರದಲ್ಲಿ ಪತ್ತಿನ ಸಹಕಾರಿಯನ್ನು ಸ್ಥಾಪಿಸಿದೆ. ಈಗ ನೌಕರರ ಅನುಕೂಲಕ್ಕೆ ಆರ್ಥಿಕ ಸಹಕಾರಕ್ಕೆ ಸಹಾಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಸ್ಥಳಗಳಲ್ಲಿ ಶಾಖೆಯನ್ನು ತೆಯುವ ಯೋಜನೆಯನ್ನು ಹೊಂದಿದೆ.

1. ಸಮುದಾಯದ ಏಕತೆ ಮತ್ತು ಸಂಘಟನೆಯ ಬಲವರ್ಧನೆ ಆದರ್ಶ ಗುರುಗಳ ನೇತೃತ್ವದಲ್ಲಿ ಸಮುದಾಯವನ್ನು ಒಗ್ಗೂಡಿಸಿ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರವನ್ನು ವೃದ್ಧಿಸುವುದು.
2. ಬಡ ಮತ್ತು ಹಿಂದುಳಿದ ವ್ಯಕ್ತಿಗಳ ಸಬಲೀಕರಣ — ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವ್ಯಕ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಮಾರ್ಗದರ್ಶನ, ಸಬಹುದು, ನೆರವು ಮತ್ತು ಅವಕಾಶಗಳನ್ನು ಒದಗಿಸುವುದು.


3. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉತ್ತೇಜನ — ಬಡ ಯುವಕರು ಮತ್ತು ಕುಟುಂಬಗಳಿಗೆ ಶಿಕ್ಷಣ, ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಿ ಅವರ ಬದುಕಿನ ಮಟ್ಟವನ್ನು ಸುಧಾರಿಸುವುದು.
4. ಸಂಘಟಿತ ಬಲ ನಿರ್ಮಾಣ — ಸಮುದಾಯದ ಒಳಗಿನ ಸಹಕಾರ, ಶಾಂತಿ ಮತ್ತು ಶ್ರದ್ಧೆಯನ್ನು ಬೆಳೆಸಿ, ಎಲ್ಲರ ಒಟ್ಟಾರೆ ಪ್ರಗತಿ ಸಾಧಿಸುವುದು.
5. ಸಾಮಾಜಿಕ ಸೇವಾ ಮತ್ತು ಕಲ್ಯಾಣ ಕಾರ್ಯಕ್ರಮಗಳು — ಅಗತ್ಯವಿರುವವರಿಗೆ ನೆರವಾಗುವ ಕಲ್ಯಾಣ ಮತ್ತು ಸೇವಾ ಚಟುವಟಿಕೆಗಳನ್ನು ಜಾರಿಗೆ ತರುವ ಮೂಲಕ ಸಮುದಾಯದ ಒಳಗಿನ ಬಡತನ ನಿವಾರಣೆಗೆ ಸಹಕರಿಸುವುದು

ವೀರಶೈವ ಲಿಂಗಾಯತ್ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸಮುದಾಯ ಮತ್ತು ನೌಕರರ ಸಾಮಾಜಿಕ ಆರ್ಥಿಕ ಶಿಕ್ಷಣ ಆರೋಗ್ಯ ಉದ್ಯೋಗ ಮತ್ತು ಸಹಕಾರದ ಮೂಲಕ ಸಮುದಾಯ ಮತ್ತು ನೌಕರರ ಒಟ್ಟಾರೆ ಕ್ಷೇಮ ಮತ್ತು ಭವಿಷ್ಯ ನಿರ್ಮಾಣವೇ ನಮ್ಮ ಮುಖ್ಯ ಉದ್ದೇಶ

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸೌಹರ್ದಪತ್ತಿನ ಸಹಕಾರಿ ನಿ., ಹರಿಹರ
ಶ್ರೀ ಎನ್.ಹೆಚ್ ಪಾಟೀಲ್ ಬಿಲ್ಡಿಂಗ್, ಶೋಭಾ ಟಾಕೀಸ್ ರಸ್ತೆ, ಹರಿಹರ.

© All rights reserved | This template is made with by